ಭಾರತ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಒಪ್ಪಂದವು ಕೇವಲ ಸಮಯದ ಪ್ರಶ್ನೆಯಾಗಿದೆ ಎಂದು ಅಮೆರಿಕ ಅಧ್ಯಕ್ಷರ ಹೇಳಿಕೆ ಸೂಚಿಸುತ್ತದೆ. ಒಪ್ಪಂದದ ಕುರಿತಾದ ಮಾತುಕತೆಗಳು ತಿಂಗಳುಗಳಿಂದ ವಿಳಂಬವಾಗುತ್ತಿವೆ. ತಮ್ಮ ಏಷ್ಯಾ ಪ್ರವಾಸದ ಕೊನೆಯ ಹಂತದಲ್ಲಿ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಮತ್ತು ಭಾರತ ದೀರ್ಘ ಕಾಲದಿಂದ ವಿಳಂಬವಾಗಿದ್ದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಹೇಳಿದ್ದಾರೆ. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಒಪ್ಪಂದವು […]Read More
ಬೆಂಗಳೂರು, ಅಕ್ಟೋಬರ್ 29: ನಗರದ ರಸ್ತೆಗಳಲ್ಲಿ ರೋಡ್ ರೋಜ್ (road rage) ಗಲಾಟೆಗಳು ಸರ್ವೇಸಾಮಾನ್ಯವಾಗಿವೆ. ಪೊಲೀಸರು ಎಷ್ಟೇ ಕೇಸ್ ಹಾಕಿ ಬುದ್ಧಿ ಹೇಳಿದರೂ ಕಿರಿಕ್ಗಳು ಮಾತ್ರ ನಿಲ್ಲುತ್ತಿಲ್ಲ. ಅದೇ ರೀತಿ ಇಲ್ಲೊಂದು ರೋಡ್ ರೇಜ್ ಕಿರಿಕ್ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ (kill) ಅಂತ್ಯವಾಗಿರುವಂತಹ ಘಟನೆ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ. ಬೈಕ್ಗೆ ಕಾರಿನಿಂದ ಡಿಕ್ಕಿ ಹೊಡೆದು ಓರ್ವ ಯುವಕನ ಕೊಲೆ ಮಾಡಲಾಗಿದೆ. ಈ ರೋಡ್ ರೇಜ್ ಕಿರಿಕ್ನಲ್ಲಿ ಕೊಲೆಯಾದ ಬೈಕ್ ಸವಾರನ ಹೆಸರು ದರ್ಶನ್. ಹೀಗೆ ಸಣ್ಣ ವಿಚಾರಕ್ಕೆ ಬೈಕ್ ಸವಾರನ ಪ್ರಾಣ ಬಲಿ ಪಡೆದಾತ ಮನೋಜ್. ಸಾಕ್ಷಿ ನಾಶಕ್ಕೆ ಸಹಾಯ ಮಾಡಿರುವ ಪತ್ನಿ ಆರತಿ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಡೆದದ್ದೇನು? ಅ. 25ರಂದು ರಾತ್ರಿ 11.20ರ ಸುಮಾರಿಗೆ ದರ್ಶನ್ ಮತ್ತು ಆತನ ಸ್ನೇಹಿತ ವರುಣ್ ಪುಟ್ಟೇನಹಳ್ಳಿಯ ಶ್ರೀರಾಮ ಬಡಾವಣೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ಮನೋಜ್ ಕಾರಿನಲ್ಲಿ ಹೋಗುತ್ತಿದ್ದು, ಯುವಕರ ಬೈಕ್ ಕಾರಿನ ಮಿರರ್ಗೆ ಟಚ್ ಆಗಿ ಡ್ಯಾಮೇಜ್ ಆಗಿತ್ತು. ಈ ವೇಳೆ ಇಬ್ಬರ ಮಧ್ಯೆ ಸ್ವಲ್ಪ ಮಾತಿನ ಚಕಮಕಿಯಾಗಿದೆ. ನಂತರ ದರ್ಶನ್ ಮತ್ತು ವರುಣ್ ಇಬ್ಬರು ತಮ್ಮ ಬೈಕ್‌ನಲ್ಲಿ ಮುಂದೆ ಹೋಗಿದ್ದು, ಎರಡು ಕಿಮೀ ನಷ್ಟು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಮನೋಜ್, ಏಕಾಏಕಿ ಬೈಕ್ಗೆ ಗುದ್ದಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡ ಸವಾರ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವರುಣ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದನ್ನೂ ಓದಿ: ಕಾರ್ ಮಿರರ್ ಹೊಡೆದಿದ್ದಕ್ಕೆ ಬೈಕ್ ಸವಾರನ ಹತ್ಯೆ: ಕಾರಿನಿಂದ ಗುದ್ದಿದ ದೃಶ್ಯ ಸಿಸಿಟಿವಿಯಲ್ಲಿ ಇಲ್ಲಿದೆ ಘಟನೆ ಬಗ್ಗೆ ಕೆಲ ಸ್ಥಳೀಯರು ಜೆಪಿ ನಗರ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪಘಾತ ಎಂದು ಕೇಸ್ ದಾಖಲಿಸಿದ್ದರು. ಆದರೆ ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಕೊಲೆ ಎಂದು ಗೊತ್ತಾಗಿದೆ. ಅಪಘಾತ ನಡೆದ ಸ್ಥಳದ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಬಂದು ಹೋಗಿರುವುದು ಕಂಡು ಬಂದಿದೆ. ಅಲ್ಲದೇ ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಫಾಲೋ ಮಾಡಿ ಡಿಕ್ಕಿ ಹೊಡೆದಿದ್ದು, ಒಮ್ಮೆ ಬೈಕ್‌ನಲ್ಲಿ ಇದ್ದವರು ಮಿಸ್ ಆಗಿದ್ದರಂತೆ. ನಂತರ ಮತ್ತೆ ಯೂ ಟರ್ನ್ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ನಡೆದ ಕೆಲ ಸಮಯದ ನಂತರ ದಂಪತಿಗಳಿಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಾಪಸ್ ಸ್ಥಳಕ್ಕೆ ಬಂದಿದ್ದಾರೆ. ಸ್ಥಳದಲ್ಲಿ ಕಾರಿನ ಕೆಲ ಪಾರ್ಟ್ಸ್ ಬಿದ್ದಿರುವುದನ್ನ ಗಮಸಿನಿ ಅವುಗಳನ್ನು ಎತ್ತಿಕೊಂಡು ಹೋಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ರೀತಿಯಲ್ಲೇ ಸಾಯ್ತೀಯಾ: ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿ ಧಮ್ಕಿ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಅಪಘಾತವಲ್ಲ, ಕೊಲೆ ಅನ್ನೋದು ಗೊತ್ತಾಗಿದೆ. ಇದೀಗ ಪುಟ್ಟೇನಹಳ್ಳಿ ಪೊಲೀಸರು ಕೇಸ್ ದಾಖಲು ಮಾಡಿ ದಂಪತಿಯನ್ನ ಅರೆಸ್ಟ್ ಮಾಡಿದ್ದಾರೆ. ಇಂತಹ ಸಣ್ಣಪುಟ್ಟ ವಿಚಾರವನ್ನ ಅಲ್ಲಿಗೆ ಬಿಟ್ಟಿದ್ದರೆ ಒಂದು ಪ್ರಾಣವು ಉಳಿಯುತ್ತಿತ್ತು. ಜೊತೆಗೆ ಜೈಲು ವಾಸವು ತಪ್ಪುತ್ತಿತ್ತು. ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.Read More
POCO M7 Pro 5G Vs Realme P3 Lite 5G: ಕೇವಲ 15 ಸಾವಿರಕ್ಕೆ ಸಿಗುವ ಅತ್ಯುತ್ತಮ ಮೊಬೈಲ್ ಯಾವುದು? ಇವತ್ತಿನ ತಂತ್ರಜ್ಞಾನ ಪ್ರಿಯರ ನಡುವೆ POCO M7 Pro 5G ಮತ್ತು Realme P3 Lite 5G ಮೊಬೈಲ್‌ಗಳ ಹೋಲಿಕೆ ಬಗ್ಗೆ ಚರ್ಚೆ ಜೋರಾಗಿದೆ. 15 ಸಾವಿರ ರೂ. ಒಳಗಿನ ಬಜೆಟ್‌ನಲ್ಲಿ ಉತ್ತಮ ಪ್ರದರ್ಶನ, ಆಕರ್ಷಕ ವಿನ್ಯಾಸ ಮತ್ತು ಉತ್ತಮ ಕ್ಯಾಮೆರಾ ಗುಣಮಟ್ಟದ ಫೋನ್ ಹುಡುಕುತ್ತಿರುವವರಿಗೆ ಇವು ಎರಡೂ ಉತ್ತಮ ಆಯ್ಕೆಗಳು. ಆದರೆ ಯಾವುದು […]Read More
ನೇರ ತೆರಿಗೆ ಸಂಗ್ರಹದಲ್ಲಿ ಭರ್ಜರಿ ಏರಿಕೆ; 11.89 ಲಕ್ಷ ಕೋಟಿಗೆ ಜಿಗಿತ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ (ಅಕ್ಟೋಬರ್ 12 ರವರೆಗೆ) ಭಾರತದ ನಿವ್ವಳ ನೇರ ತೆರಿಗೆ ಆದಾಯವು ಶೇ. 6.33 ರಷ್ಟು ಹೆಚ್ಚಾಗಿ 11.89 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬಲವಾದ ಕಾರ್ಪೊರೇಟ್ ತೆರಿಗೆ ಸಂಗ್ರಹ ಮತ್ತು ನಿಧಾನಗತಿಯ ಮರುಪಾವತಿ ಪಾವತಿಗಳಿಂದಾಗಿ ನೇರ ಆದಾಯ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಹೇಳಿಕೆ ತಿಳಿಸಿದೆ. […]Read More
ಬೆಂಗಳೂರಿನಲ್ಲಿ ರೋಡ್ ರೇಜ್ ಕಿರಿಕ್: ಕಾರಿನಿಂದ ಗುದ್ದಿ ಬೈಕ್ ಸವಾರನ ಕೊಲೆ; ದಂಪತಿ ಬಂಧನ ಬೆಂಗಳೂರು, ಅಕ್ಟೋಬರ್ 29: ನಗರದ ರಸ್ತೆಗಳಲ್ಲಿ ರೋಡ್ ರೋಜ್ (road rage) ಗಲಾಟೆಗಳು ಸರ್ವೇಸಾಮಾನ್ಯವಾಗಿವೆ. ಪೊಲೀಸರು ಎಷ್ಟೇ ಕೇಸ್ ಹಾಕಿ ಬುದ್ಧಿ ಹೇಳಿದರೂ ಕಿರಿಕ್ಗಳು ಮಾತ್ರ ನಿಲ್ಲುತ್ತಿಲ್ಲ. ಅದೇ ರೀತಿ ಇಲ್ಲೊಂದು ರೋಡ್ ರೇಜ್ ಕಿರಿಕ್ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ (kill) ಅಂತ್ಯವಾಗಿರುವಂತಹ ಘಟನೆ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ. ಬೈಕ್ಗೆ ಕಾರಿನಿಂದ ಡಿಕ್ಕಿ ಹೊಡೆದು ಓರ್ವ ಯುವಕನ ಕೊಲೆ ಮಾಡಲಾಗಿದೆ. ಈ […]Read More
ಯುಜಿಸಿಇಟಿ 2025 ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಪ್ರಕಟ: 12ನೇ ಕ್ಲಾಸ್ ಅಂಕಗಳ ನಮೂದಿಗೆ ಈ ಸೂಚನೆಗಳು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿರುವ ಅಭ್ಯರ್ಥಿಗಳಿಗೆ ತಮ್ಮ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ನಮೂದಿಗೆ ಸಂಬಂಧ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಇಲ್ಲಿ ಸದರಿ ಸೂಚನೆಗಳನ್ನು ಓದಿಕೊಂಡು, ಅಂತೆಯೇ ಪಾಲಿಸಿ. ಮೇ 20 ರೊಳಗೆ ಸಿಇಟಿ ರಿಸಲ್ಟ್ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಹಾಗೂ ಕ್ರೀಡಾ ಕೋಟ ಮೀಸಲು ಬಯಸುವವರಿಗೂ ಕೆಲವು […]Read More
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ: 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ಮೈಸೂರು ದಸರಾ ವಸ್ತುಗಳ ಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ನಿರ್ಮಿಸಿದ ಜಾಗೃತಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶರಣಪ್ಪ ಸಲಾದಪುರ ಅವರು, ಬೆಳೆದ ಮಕ್ಕಳ ಜೊತೆಗೆ ಬೆಳೆಯುವ ಮಕ್ಕಳಿಗೆ ಮದ್ಯ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, […]Read More
ಮದ್ಯ, ಮಾದಕ ವಸ್ತು ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು- ಶರಣಪ್ಪ ಸಲಾದಪುರ ಮೈಸೂರು ದಸರಾ ವಸ್ತುಗಳ ಪ್ರದರ್ಶನ ಆವರಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ನಿರ್ಮಿಸಿದ ಜಾಗೃತಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶರಣಪ್ಪ ಸಲಾದಪುರ ಅವರು, ಬೆಳೆದ ಮಕ್ಕಳ ಜೊತೆಗೆ ಬೆಳೆಯುವ ಮಕ್ಕಳಿಗೆ ಮದ್ಯ ಮತ್ತು ಮಾದಕ ವಸ್ತುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, […]Read More
ಚಿತ್ರಮಂದಿರಗಳಲ್ಲಿ ಯಶಸ್ವಿ ಓಟದ ಮಧ್ಯೆ OTT ಗೆ ಬಂದೆ ಬಿಡ್ತು ಕಾಂತಾರ ಅಧ್ಯಾಯ 1; ಸಾವಿರ ಕೋಟಿ ರೂ ಕಲೆಕ್ಷನ್ ಮೇಲೆ ಕಾರ್ಮೋಡ! ರಿಷಭ್ ಶೆಟ್ಟಿ ಅವರ ಮಹಾಕಾವ್ಯ ಚಿತ್ರ ಕಾಂತಾರ ಅಧ್ಯಾಯ 1 ರ OTT ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ವಿಡಿಯೋ ಟೀಸರ್ ಮೂಲಕ ಘೋಷಿಸಿದ್ದು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಕಾಂತಾರ ಅಧ್ಯಾಯ 1 OTT ಪ್ಲಾಟ್‌ಫಾರ್ಮ್‌ನಲ್ಲಿ ಯಾವಾಗ ಬಿಡುಗಡೆಯಾಗಲಿದೆ? ಕಾಂತಾರ ಅಧ್ಯಾಯ 1 OTT ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದೆ. OTT ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ […]Read More
ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್, ಎಲೈಟ್ ಗ್ರೂಪ್ ಸೇರಿದ ಸೂರ್ಯ ಕುಮಾರ್ ಯಾದವ್! ಕ್ಯಾನ್ ಬೆರಾ: ಪ್ರಬಲ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ಸೂರ್ಯ ಕುಮಾರ್ ಯಾದವ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾನ್ ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆರಿಸಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ […]Read More
