ಚಿತ್ರಮಂದಿರಗಳಲ್ಲಿ ಯಶಸ್ವಿ ಓಟದ ಮಧ್ಯೆ OTT ಗೆ ಬಂದೆ ಬಿಡ್ತು ಕಾಂತಾರ ಅಧ್ಯಾಯ 1; ಸಾವಿರ ಕೋಟಿ ರೂ ಕಲೆಕ್ಷನ್‌ ಮೇಲೆ ಕಾರ್ಮೋಡ!

ರಿಷಭ್ ಶೆಟ್ಟಿ ಅವರ ಮಹಾಕಾವ್ಯ ಚಿತ್ರ ಕಾಂತಾರ ಅಧ್ಯಾಯ 1 ರ OTT ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ವಿಡಿಯೋ ಟೀಸರ್ ಮೂಲಕ ಘೋಷಿಸಿದ್ದು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಕಾಂತಾರ ಅಧ್ಯಾಯ 1 OTT ಪ್ಲಾಟ್‌ಫಾರ್ಮ್‌ನಲ್ಲಿ ಯಾವಾಗ ಬಿಡುಗಡೆಯಾಗಲಿದೆ? ಕಾಂತಾರ ಅಧ್ಯಾಯ 1 OTT ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದೆ. OTT ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಚಿತ್ರವನ್ನು “ಲೆಜೆಂಡರಿ” ಎಂದು ಕರೆಯುವ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಕಾಂತಾರ ಅಧ್ಯಾಯ 1 ರ OTT ಬಿಡುಗಡೆಗಾಗಿ “ಕಾಯುತ್ತಿದ್ದೇವೆ” ಎಂದು ಅಭಿಮಾನಿಗಳು ಹೇಳಿದರು.

ಕಾಂತಾರ ಅಧ್ಯಾಯ 1 ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಅಂದರೆ ಅದರ ಥಿಯೇಟ್ರಿಕಲ್ ಬಿಡುಗಡೆಯ ಸುಮಾರು ನಾಲ್ಕು ವಾರಗಳ ನಂತರ. ಆದಾಗ್ಯೂ, ಚಿತ್ರವು ದೇಶೀಯವಾಗಿ ಮತ್ತು ಜಾಗತಿಕವಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು ಇದರ ನಡುವೆ ಚಿತ್ರ OTT ಬಿಡುಗಡೆಯಾಗುತ್ತಿರುವುದರಿಂದ ಅದರ ಥಿಯೇಟ್ರಿಕಲ್ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ಹೌದು… ಕಾಂತಾರ ಅಧ್ಯಾಯ 1 ಚಿತ್ರ 1000 ಕೋಟಿ ಕ್ಲಬ್ ಸೇರುತ್ತದೆ ಎಂದು ಭಾವಿಸಲಾಗಿತ್ತು. ಕಾಂತಾರ: ಅಧ್ಯಾಯ 1 ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದ್ದು, ಪ್ರಪಂಚದಾದ್ಯಂತ 200 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರವು ಅಕ್ಟೋಬರ್ 31ರಿಂದ ಕನ್ನಡದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಡಬ್ಬಿಂಗ್ ಆವೃತ್ತಿಗಳೊಂದಿಗೆ ಲಭ್ಯವಿರುತ್ತದೆ.