ಬೆಂಗ್ಳೂರು ಇತಿಹಾಸದಲ್ಲೇ ಅತಿ ಎತ್ತರದ 200 ಕೋಟಿ ವೆಚ್ಚದ ಬೃಹತ್‌ ಕಟ್ಟಡ ತೆರವಿಗೆ ಜಿಬಿಎ ಸೂಚನೆ

aswe

ಬೆಂಗಳೂರು: ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 18 ಅಂತಸ್ತಿನ ಬೃಹತ್ ಕಟ್ಟಡದ ಒಂದು ಭಾಗ ವಾಲಿರುವ ಹಿನ್ನೆಲೆಯಲ್ಲಿ, ಅದನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಸೂಚನೆ ನೀಡಿದೆ. ಬೆಂಗಳೂರಿನ ಇತಿಹಾಸದಲ್ಲೇ ಅತಿ ಎತ್ತರದ ಕಟ್ಟಡ ತೆರವು ಕಾರ್ಯಾಚರಣೆಯೊಂದಕ್ಕೆ ಈಗ ಸಿದ್ಧತೆ ನಡೆಯುತ್ತಿದೆ.

49 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಈ ಕಟ್ಟಡವು ಅವೈಜ್ಞಾನಿಕ ನಿರ್ಮಾಣದಿಂದ ಒಂದು ಕಡೆ ವಾಲಿದ್ದು, ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ಕಟ್ಟಡಕ್ಕೆ ಗಂಭೀರವಾದ ರಚನಾತ್ಮಕ ಹಾನಿಯಾಗಿರುವುದು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾಲಿರುವ ಕಟ್ಟಡದ ಭಾಗವನ್ನು ತೆರವುಗೊಳಿಸಲು ಜಿಬಿಎ ನಿರ್ದೇಶನ ನೀಡಿದೆ.

bbnewskannada.com

https://bbnewskannada.com

Related post

Leave a Reply

Your email address will not be published. Required fields are marked *