ಯುಜಿಸಿಇಟಿ 2025 ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಪ್ರಕಟ: 12ನೇ ಕ್ಲಾಸ್ ಅಂಕಗಳ ನಮೂದಿಗೆ ಈ ಸೂಚನೆಗಳು
ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿರುವ ಅಭ್ಯರ್ಥಿಗಳಿಗೆ ತಮ್ಮ ಪಿಯುಸಿ ಅಥವಾ 12ನೇ ತರಗತಿ ಅಂಕಗಳ ನಮೂದಿಗೆ ಸಂಬಂಧ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಇಲ್ಲಿ ಸದರಿ ಸೂಚನೆಗಳನ್ನು ಓದಿಕೊಂಡು, ಅಂತೆಯೇ ಪಾಲಿಸಿ. ಮೇ 20 ರೊಳಗೆ ಸಿಇಟಿ ರಿಸಲ್ಟ್ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಹಾಗೂ ಕ್ರೀಡಾ ಕೋಟ ಮೀಸಲು ಬಯಸುವವರಿಗೂ ಕೆಲವು ಸೂಚನೆಗಳನ್ನು ಪ್ರಕಟಿಸಲಾಗಿದೆ.
ಆರ್ಕಿಟೆಕ್ಚರ್ ಕೋರ್ಸಿಗೆ ನಾಟಾ ಪರೀಕ್ಷೆಯ ಅಂಕಗಳನ್ನು ನಮೂದಿಸುವ ಕುರಿತು ಸಇಟಿ-2025 ಕ್ಕೆ ನೋಂದಣಿ ಮಾಡಿ ಅಪ್ಲಿಕೇಶನ್ ಹಾಕಿದ ಹಾಗೂ ನಾಟಾ -2025 ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿಗಾಗಿ ನಾಟಾ -2025ರ ಅಂಕಗಳನ್ನು ದಾಖಲಿಸಲು ಸದ್ಯದಲ್ಲಿಯೇ ಲಿಂಕ್ ಅನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ತೆರೆಯಲಾಗುವುದು ಎಂದು ತಿಳಿಸಲಾಗಿದೆ. ಕೆಇಎ ಯುಜಿಸಿಇಟಿ 2025 ಕೌನ್ಸಿಲಿಂಗ್ ನಲ್ಲಿ ಭಾಗವಹಿಸುವ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕ್ರೀಡಾ ಕೋಟಾ ಮೀಸಲು ಸೌಲಭ್ಯಕ್ಕಾಗಿ ಕ್ರೀಡಾ ಪ್ರಮಾಣ ಪತ್ರಗಳನ್ನು ದಿನಾಂಕ 16-05-2025 ರಿಂದ 20-05-2025 ರವರೆಗೆ ಕೆಇಎ ಬೆಂಗಳೂರು ಇಲ್ಲಿ ಖುದ್ದಾಗಿ ಸಲ್ಲಿಸಲು ಸೂಚನೆ ನೀಡಲಾಗಿದೆ.